ಅವಕಾಶಗಳು ಸಿಕ್ಕಿದ್ದು ಬಯಸದೆ ಬಂದ ಭಾಗ್ಯ
Posted date: 20 Sun, Jan 2013 ? 03:31:32 PM

 ಕರ್ನಾಟಕ ಚಲನಚಿತ್ರ ಅಕಾಡಮಿನವರು ಏರ್ಪಡಿಸುವ ೨೦೧೩ರ ಮೊದಲ ಬೆಳ್ಳಿಹೆಜ್ಜೆ ಸಂವಾದದಲ್ಲಿ ೩೫ ವರ್ಷದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ ೩೦೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಪ್ರಸಕ್ತ ಚಾಲ್ತಿಯಲ್ಲಿರುವ ಹಿರಿಯ ಪೋಷಕನಟ ರಮೇಶ್‌ಭಟ್ . ಅವರು ತಾವು ಬೆಳೆದುಬಂದ ದಾರಿಯ ಬಗ್ಗೆ ಗತಕಾಲದ ನೆನಪುಗಳನ್ನು ಮರುಕಳುಸಿತ್ತಾ  ಹೋದರು. ನಾವು ಹೇಳುವುದಕ್ಕಿಂತ ಅವರ ಬಾಯಿಂದ ಕೇಳುವುದು ಸೂಕ್ತ. ಓವರ್ ಟು ರಮೇಶ್‌ಭಟ್.
      ರತ್ನಾಕರ್‌ಭಟ್ ಮತ್ತು ಸುಲೋಚನ ದಂಪತಿಯ ೯ ಮಕ್ಕಳಲ್ಲಿ ಮೊದಲನೆವನಾಗಿ ಕುಂದಾಪುರದ ಮಂಕಿ ಗ್ರಾಮ ಉಗಮ ಸ್ಥಾನ. ಉಡುಪಿಯಲ್ಲಿ  ಎರಡು ಕೆಲಸಕ್ಕೆ ಪ್ರಸದ್ದಿ. ಪುರೋಹಿತ, ಅಡಿಗೆಭಟ್ಟ. ತಂದೆಯವರು ಎರಡನೆದನ್ನು ಆರಿಸಿಕೊಂಡು ದುರ್ಬರ ಪರಿಸ್ಥಿತಿಯಲ್ಲಿ ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದೆವು. ಶಾಲೆ ದಿನಗಳಲ್ಲೆ ನಾಟಕದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಾ ಮೇಷ್ಟ್ರರಿಂದ ಭೇಷ್ ಎನಿಸಿಕೊಂಡು ಅವರ ಶಿಪಾರಸ್ಸಿನಿಂದ ಪಾಸ್ ಆಗುತ್ತಿದ್ದೆ. ಮುಂದೆ ಪಾಲಿಟೆಕ್ನಿಕ್‌ಗೆ ಸೇರಿಕೊಂಡು ಅಲ್ಲಿಯೂ ಗ್ರೇಸ್ ಮಾರ್ಕ್ಸ್ ತೆಗೆದುಕೊಂಡು ತಂದೆ ಸಲಹೆ ಮೇರೆಗೆ ಅಂಗಡಿ ವ್ಯಾಪಾರ ಶುರುಮಾಡಿದರೂ ಅಂತರಾಳದ ಮನಸ್ಸು ನಟನೆ ಮಾಡಲು ಹಾತೊರೆಯುತ್ತಿತ್ತು. ಆಗ ಬಿವಿಕಾರಂತ್, ಮೇಕಪ್‌ನಾಣಿ ತಂಡದ ಜೊತೆ ಸೇರಿಕೊಂಡು ಅಲ್ಲಲ್ಲಿ ನಾಟಕ ಆಡುತ್ತಿದ್ದಾಗ ನಾಣಿರವರು ಅಬಚೂರಿನ ಪೋಸ್ಟ್ ಆಫೀಸು ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ನಂತರ ಅನಾಯಾಸವಾಗಿ ಪಾತ್ರಗಳು ಒದಗಿಬಂದು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಾ ಬಂದೆ. ನಿಜ ಹೇಳ ಬೇಕಂದರೆ ನನಗಂತಲೆ  ಪಾತ್ರಗಳು ಸ್ಥಷ್ಟಿಯಾಗುತ್ತಿರಲಿಲ್ಲ. ಬೇರೆಯುವರು ಮಾಡುವಂತಹ ಪಾತ್ರಗಳು ಅವರ ಗೈರುಹಾಜರಿ ಇಲ್ಲವೆ ಬೇರೆಕಾರಣಗಳಿಂದ ನನಗೆ ಸಿಗುತ್ತಿತ್ತು ಒಂದು ರೀತಿಯಲ್ಲಿ ಬಯಸದೆ ಬಂದ ಭಾಗ್ಯ ಅಂತ ಹೇಳಬಹುದು.
ವಿಷ್ಣುವರ್ದನ್, ಶಂಕರ್‌ನಾಗ್ ಸ್ನೇಹ.........
      ವಿಷ್ಣುವರ್ದನ್  ಚಿತ್ರರಂಗಕ್ಕೆ ಬರುವ ಮುಂಚೆ ಪರಿಚಯವಿತ್ತು. ಅವರ ತಂಗಿ ನನ್ನ ಅಂಗಡಿಗೆ ಬರುತ್ತಿದ್ದರು. ಅವರಿಗೂ ನಾಟಕ ಹುಚ್ಚು ಇದ್ದ್ದುದರಿಂದ ಆಗಾಗ್ಗೆ ಅವರ ಮನೆಗೆ ಹೋದಾಗ ಅಲ್ಲಿ ಸಂಪತ್‌ಕುಮಾರ್ ಭೇಟಿಯಾಗುತ್ತಿತ್ತು. ಅವರು ತುಂಬಾ ರಿಷರ್ವ್ ಆಗಿದ್ದರೂ ನನ್ನ ಜೊತೆ ಸ್ನೇಹದಿಂದ ಇದ್ದರು. ಮಹೂರ್ತದಲ್ಲಿ ನನ್ನ ಕೈಯಿಂದ ತಿಲಾಂಜಲಿ ಹಾಕಿಸಿಕೊಳ್ಳುತ್ತಿದ್ದರು. ಸಾಯುವ ಎರಡು ದಿನದ ಮುಂಚೆ ಅವರನ್ನು ಭೇಟಿಮಾಡಿದಾಗ ಈ ಸಲದ ಹೊಸ ವರ್ಷ ಬೆಂಗಳೂರಿನಲ್ಲೆ ಆಚರಿಸೋಣ ೩೧ ರಂದು ಬರುತ್ತೇನೆ ಎಂದವರು ಮರಳಿಬರಲೆ ಇಲ್ಲ ಅಂತ ಗದ್ಗಗಿತರಾದರು ರಮೇಶ್‌ಭಟ್.                
       ಶಂಕರ್‌ನಾಗ್ ಪ್ರಾರಂಭದಲ್ಲಿ ನಾಟಕ ತಂಡವನ್ನು ಶುರುಮಾಡುವ ಸಲುವಾಗಿ ನನ್ನನ್ನು ಭೇಟಿಮಾಡಿದ ಪ್ರಸಂಗವನ್ನು ನೆನಸಿಕೊಂಡು ನಮ್ಮಿಬ್ಬರ ಮಧ್ಯೆ ಯಾವುದೆ ಭಿನ್ನಾಭಿಪ್ರಯ, ಕೃತ್ರಿಮ ಇರಲಿಲ್ಲ. ಅವನು ಯಾವಾಗಲೂ ಏನಾದರೂ ಹೊಸತನ್ನು ಕೊಡಬೇಕೆಂದು ನಿಸ್ತೇಜನಾಗದೆ ಹಾತೊರೆಯುತ್ತಿದ್ದ. ಮಾಲ್ಗುಡಿಡೇಸ್, ಮಿಂಚಿನಓಟ ಚಿತ್ರಕ್ಕೆ ಸಹಾಯಕ ನಿರ್ದೇಶನಮಾಡಿದ್ದೆ. ಆಗಿನಕಾಲಕ್ಕೆ ಮೆಟ್ರೋರೈಲು, ಫ್ಲೈಓವರ್, ಕಡಿಮೆ ಬೆಲೆಗೆ ಇಟ್ಟಿಗೆ ಕಾರ್ಖನೆ ತೆಗೆಯಲು ಯೋಜನೆ ಹಾಕಿಕೊಂಡು ಚಿತ್ರರಂಗದಲ್ಲಿ ಕ್ರಾಂತಿ ಮಾಡಲು ಜಿಜ್ಘಾಸೆಯಿಂದ ಸಾಕಷ್ಟು ಐಡಿಯಾಗಳನ್ನು ಯಾವಾಗಲೂ ಜ್ವಲಂತವಾಗಿ ಹೇಳುತ್ತಿದ್ದ್ದ. ಎಲ್ಲವು ಅವನ ಜೊತೆಗೆ ನಿರ್ನಾಮವಾಯಿತು.ಅವನ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಮತ್ತೆ ಬರಲಿ ಶಂಕರ.
ಸಂಕೇತ್ ಸ್ಟುಡಿಯೋ ತೆರೆದದ್ದು..........
      ಆಗಿನ ಕಾಲದಲ್ಲಿ ಕನ್ನಡ ಚಿತ್ರಗಳ ಡಬ್ಬಿಂಗ್, ರೀರೆರ್ಕಾಡಿಂಗ್, ಹಿನ್ನಲೆಸಂಗೀತ ಕೆಲಸಗಳು ಚೆನ್ನೈನಲ್ಲಿ ಆಗುತ್ತಿತ್ತು. ಇದರಿಂದ ಸಾಕಷ್ಟು ಸಮಯ ಮತ್ತು ಹಣ ಪೋಲಾಗುತ್ತಿದ್ದನ್ನು ಮನಗಂಡ ಶಂಕರ್‌ನಾಗ್ ನಾವು ಏಕೆ ಇಲ್ಲಿಯೆ ಒಂದು ಸ್ಟುಡಿಯೋ ಪ್ರಾರಂಭ ಮಾಡಬಾರದು ಅಂತ ಯೋಚಿಸಿ ರಮೇಶ್‌ಭಟ್, ಅನಂತ್‌ನಾಗ್, ಸಿವಿಎಲ್ ಶಾಸ್ತ್ರೀ, ಆರುಂದತಿನಾಗ್ ಉಸ್ತುವಾರಿಯಲ್ಲಿ ಹಣ ತೂಡಗಿಸಿ ಸಂಕೇತ್ ಸ್ಟುಡಿಯೊ ಪ್ರಾರಂಭ ಮಾಡಿದಾಗ ಎಲ್ಲರೂ ಸೋಜಿಗದಿಂದ ಶಂಕರ್ ಶ್ರಮವನ್ನು ಇಡೀ ಚಿತ್ರರಂಗ ಕೊಂಡಾಡಿತು. ಆದರೆ ಅವರ ಮರಣಾನಂತರ ಅನಂತ್‌ನಾಗ್ ನಿರ್ಲಿಪ್ತತೆಯಿಂದ ಸ್ಟುಡಿಯೋ ಮುಚ್ಚಿಹೋಯಿತು. ಮತ್ತು ಸಂಕೇತ್ ತಂಡದಲ್ಲಿದ್ದ ಎಲ್ಲರೂ ಬದುಕುವ ದಾರಿಯನ್ನು ನೋಡಿಕೊಂಡ ಕಾರಣ ಎಲ್ಲರೂ ಬೇರೆಬೇರೆಯಾದವು ಎಂದು ಖೇದಗೊಂಡರು.
       ರಮೇಶ್‌ಭಟ್ ಪೋಲಿಸ್ ಆಗಲಿಲ್ಲ ಅಪರಾಧಿಗಳನ್ನು ಹಿಡಿದರು, ನ್ಯಾಯಧೀಶರಾಗಲಿಲ್ಲ  ತೀರ್ಪು ಕೊಟ್ಟರು, ಡಾಕ್ಟರ್ ಆಗಲಿಲ್ಲ ಆಪರೇಶನ್ ಮಾಡಿದರು ಇವೆಲ್ಲವೂ ಕಲಾವಿದನಿಂದ ಮಾತ್ರ ಸಾಧ್ಯ. ಅವರು ಜೀವನದಲ್ಲಿ ವ್ಯಾಪ್ತಿ, ಪ್ರಾಪ್ತಿ, ತೃಪ್ತಿ ಕಂಡುಕೊಂಡಿದ್ದರಿಂದಲೇ  ಸುಖವಾಗಿರುವುದು ಅಂತ ಅವರ ಅಭಿಪ್ರಾಯವಾಗಿದೆ. ಲಾರಿಡ್ರೈವರ್, ಅಶ್ವಮೇದ, ಸಿಪಾಯಿ ಚಿತ್ರಗಳಲ್ಲಿ ನಟಿಸುವಾಗ ಪ್ರಾಣಕ್ಕೆ ಕುತ್ತು ಬಂದ ಬಗೆಯನ್ನು ಹೇಳುತ್ತಾ ಎಲ್ಲರನ್ನು ನಗಿಸಿ ತಾವು ನಕ್ಕರು. ಡಾ ರಾಜ್‌ಕುಮಾರ್ ಜೊತೆಗೆ ನಟಿಸಿದ ಒಂದು ಮುತ್ತಿನ ಕಥೆ  ಮರೆಯಲಾಗದ್ದು ಎಂದು ಘಟನೆ ಹೇಳಿ ಪುಳಕಗೊಂಡು. ಅಂತವರು ಮತ್ತೋಮ್ಮೆ ಹುಟ್ಟಿಬರಬೇಕು. ಜೀವನದಲ್ಲಿ ಎರಡು ಮೌಲ್ಯಗಳನ್ನು ಕಳೆದುಕೊಂಡೆ ಅದು ವಿಷ್ಣು, ಶಂಕರ್. ಜಮಾನದಲ್ಲಿ ಕಿರುತೆರೆಯ ಅಮಿತಾಬ್‌ಬಚ್ಚನ್ ಅಂತ ಕರೆಸೆಕೊಂಡು, ಕ್ರೇಜಿಕರ್ನಲ್ ಧಾರವಾಹಿ ಇವರನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಿತ್ತು. ವಯಸ್ಸು ೬೦ ಆಗಿದ್ದರೂ ಈಗಲೂ ಕ್ರೇಜಿಕರ್ನಲ್ ನಗೆ ಚೆಲ್ಲುತ್ತಾರೆ ರಮೇಶ್‌ಭಟ್.


GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed